Skip to main content

Full text of "ಕಡಲೇಪುರಿ"

See other formats


UNIVERSAL 
LIBRARY 


OU _198617 


೬೬ಆ'ಗಆ6| 1 
IVSHAINN 


ಕಡಲೆಪುರಿ 


ಯ್ಯ ರಾಜರತ್ನಂ 


ಬಾ 


ಪ್ರೋಗ್ರೆಸ್‌ ಬುಕ್‌ ಸ್ಟಾಲ್‌ 
ಮೈಸೂರು 


೧೯೪೦ 


ಮೊದಲ ಮುದ್ರಣ- ೧೯೩೩; ಎರಡನೆಯದಾರ೯೪( 


(ಈ ಪುಸ್ತಕದ ಎಲ ಹಕೂ ಗ.೦ಹಕರ್ತ೯ಪಿಗೇ ಸೇರಿದೆ) 


ವಿವರ 
ಕನ್ನಡ ನಾಡಿನ ಕಂದ586/ ಉಗ್ರ 
ಕಡಲೆ ಪುರಿ IH 
ಕುದುರೆ ಸವಾರಿ ಯ್‌ ಘೌ: 
ಕುರುಬನ ಕುರಿ ರ ಶಿ 
ತೂಗು ತೊಟ್ಟಲನು ಬ್‌ 
ಒಂದು ಒಂದು ಎರಡು ೦ 
ಗುಬ್ಬಿ ಗಿಂ 
ಪ್ರಾರ್ಥನೆ ಎಂ 


ಛೂ! ಛೂ! ಛೂ! ದ ಳೌ 
ನಮ್ಮ ಮನೆಯ ಸಣ್ಣ ಪನ ; 
ಕಳ್ಳ ಮೆಲ್ಲ 

ಓಬೀರಾಯನ ಕಾಲದಲಿ 

ಕೂಸು ಮರಿ 

ಒಂದು ಕತೆ 

ರೋತೆ ರಾಮು 

ನವಿಲು 

ಕಳ್ಳ ರಂಗಪ್ಪ 
ಫಸ ಗಪೂರನ ಕುದುರೆಯ ಗಾಡಿ 


ಣ್ಕ (ಆ ee Dp 


೧೦ 
೧೨ 
೧೪ 
೧೫ 
೧೬ 
೧೮ 


೨೩ 
೨೫ 
೨೬ 
೨೭ 
೨೯ 
೩೧ 


ಕನ್ನಡ ನಾಡಿನ ಕಂದನಿಗೆ 


ಕುಣಿ ಕುಣಿ ಕಂದ ನೀ ಚಿಗಿದು! 
ನಿನ್ನೊಡನಾಡುವೆ ನಾ ನೆಗೆದು! 
ಹಾರೀ ಚಿಮ್ಮೀ ಚಿಮ್ಮೀ ಹಾರೀ 
ಕೊನೆ ಮೊದಲಿಲ್ಲದೆ ಅನೇಕ ಸಾರಿ 
ಸುಣಿ ಕುಣಿ ಕಂದ ಕ್ಸ ತಟ್ಟಿ! 
ಹಾಡನು ಹಾಡುವೆ ಮನಮುಟ್ಟಿ! 


ಕುಣಿ ಕುಣಿ ಕಂದ ನೀ ಚಿಗಿದು! 
ನಿನ್ನೊಡನಾಡುವೆ ನಾ ನೆಗೆದು! 
ಮೇಲಕು ಕೆಳಕೂ ಎಡಕೂ ಬಲಕೂ 
ಸುತ್ತಾ ಮುತ್ತಾ ಗಿರಿಗಿರಿ ತಿರುಗು! 
ಕುಣಿ ಕುಣಿ ಕಂದ ಕ್ರೈ ತಟ್ಟ! 
ಹಾಡನು ಹಾಡುವೆ ಮನಮುಟ್ಟಿ! 





ಕಡಲೆ ಪುರಿ 
ಪುರಿ! ಪುರಿ! ಕಡಲೆಪುರಿ! 
ಗರಂ ಗರಂ ಕಡಲೆಪುರಿ! 

ಎಲ್ಲ ಬನ್ನಿ 

ತೆಗೆದು ತಿನ್ನಿ 
ಗರಂ ಗರಂ ಕಡಲೆ ಪುರಿ! 
ಕಾಸಿಗೊಂದು ಸೇರು ಪುರಿ! 


ಬಿಸಿ ಬಿಸಿ ಕಡಲೆ ಪುರಿ! 
ಕರಂ ಕುರಂ ಕಡಲೆ ಪುರಿ! 
ಕೊಬರಿ ಇಲ್ಲ! 
ಇದೆ ಬೆಲ್ಲ! 
ತಿನ್ನಿ! ತಿನ್ನಿ! ಕಡಲೆ ಪುರಿ! 
ಗ ಡು ಸೇರು ಪುರಿ! 


ಮಕ್ಕಳಿಗೆ ತಕ್ಕ ಪುರಿ! 
ಗರಂ ಗರಂ ಕಡಲೆ ಪುರಿ! 
ಕಾಸೆ ಬೇಡ! 
ತಿಂದು ನೋಡಿ! 
ಬಿಪಿ ಬಿಸಿ ಕಡಲೆ ಪುರಿ! 
ಕಾಸಿಗೊಂದು ಸೇರು ಪುರಿ! 


೫ 


ಕುದುರೆ ಸವಾರಿ 


———— 


ಚೆಡ್ಡಿ ಗಿಡ್ಡಿ ಹಾಕಿಕೊಂಡು 
ಕುದುರೆ ಮೇಲೆ ಕುಳಿತುಕೊಂಡು 
ಲಗಾಮು ಹಿಡಿದುಕೊಂಡು 
ಹೈ! ಹೈ! ಹೈ! 
ಲಂಗ ಗಿಂಗ ಹಾಕಿಕೊಂಡು 
ಕುದುರೆ ಮೇಲೆ ಕುಳಿತುಕೊಂಡು 
ಅಣ್ಣನ ಸೊಂಟ ಹಿಡಿದುಕೊಂಡು 
ಹೈ! ಹೈ! ಹೈ! 


ಕಂದು ಬಣ್ಣ ನಮ್ಮ ಕುದುರೆ 
ಗಾಳಿ ಹಾಗೆ ಓಡೊ ಕುದುರೆ 
ನಮ್ಮ ಕುದುರೆ! ನಮ್ಮ ಕುದುರೆ! 
ಹೈ! ಹೈ! ಹೈ! 
ಕುದುರೆ ಮೇಲೆ ಕುಳಿತುಕೊಂಡು 
ಅದರ ಬೆನ್ನ ತಟಿ ಕೊಂಡು 
ಅಲ್ಲಿ ಇಲ್ಲಿ ಸುತ್ತಿ ಕೊಂಡು 
ಹೈ! ಹೈ! ಹೈ! 


ಕುದುರೆ ಮೇಲೆ ಕುಳಿತುಕೊಂಡು 
ಹಳ್ಳ ಗಿಳ್ಳ ಹಾರಿಕೊಂಡು 
ಮನೆಗೆ ಬಂದು ಸೇರಿಕೊಂಡು 
ಹೈ! ಹೈ! ಹೈ! 
ಕುದುರೆ ಮೈಯ ಸವರಿ ತಟ್ಟಿ 
ಹುರುಳಿ ಗಿರಳಿ ತಂದು ಕೊಟ್ಟು 
ಸಾಕುವೆವು ನಮ್ಮ ತಟ್ಟು 
ಹೈ! ಹೈ! ಹೈ! 


ಕುರುಬನ ಕುರಿ 


—— 


ಹೊಟ್ಟೆಯ ಹಸಿವಿಗೆ ಅಳುತ್ತ ಬಂದಿತು 
ಕುರುಬನ ಕುರಿಯೊಂದು 

ಅಳುವುದ ನಿಲ್ಲಿಸಿ ನಗುತ್ತ ಹೋಯಿತು 
ಕಾಸಿನ ಪುರಿ ತಿಂದು 

ಹೊಲಕ್ಕೆ ಹೋಗುವುದಿಲ್ಲವೆನುತ್ತ 
ಕುಂಟತು ಕಳ್ಳ ಶುರಿ 


ಕುರುಬನು ಗರುಕೆಯ ತಿನಿಸುವೆನೆನ್ನಲು 
ಕುಣಿಯಿತು ಕಳ್ಳ ಕುರಿ 


೭ 


ಹೊಲದಲಿ ನಾಯಿಯ ಬಾಲವ ಹಿಡಿದು 


ಎಳೆಯಿತು ತುಂಟ ಕುರಿ 
ನಾಯಿಯು ತಿರುಗಲು ಛಂಗನೆ ಹಿಂದಕೆ 


ಚಿನ್ಮಿತು ತುಂಟಿ ಕುರಿ 





# 





ಕೇಜ್‌ 
ಗ $y 1 Kl 
ಲ 


ಬಸವೆನ ಹಿಂದಿನ ಬಾಲದ ಹಾಗೆ 
ಕುರುಬನ ಹಿಂದುಗಡೆ 

ಕುರಿಮರಿ ಕುಣಿಯುತ ನಡೆಯಿತು ಹಿಗ್ಗಿ 
ಕುರುಬನ ಹಿಂದುಗಡೆ 


ತೂಗು ತೊಟ್ಟಿಲನು 


ತೂಗು ತೊಟ್ಟಿಲನು ತೂಗು ತೊಟ್ಟಿಲನು 
ನಮ್ಮ ಜಾಣಮರಿ ಮಲಗಲಿ 

ತೂಗು ತೊಟ್ಟಿಲನು ಲಾಲಿ ಹೇಳುತಲಿ 
ಸಣ್ಣ ರಾಗದಲಿ ದನಿಯಲಿ 

ನಾಕು ಹಗ್ಗಗಳ ಹಿಡಿದು ತೂಗಿದರೆ 

ಪುಟ್ಟಿ ತೊಟ್ಟಿಲಿನ ಸುತ್ತ ಕಟ್ಟಿರುವ 
ಗೆಜ್ಜೆ ಗಂಟೆಗಳು ಅಲುಗಲಿ 

ತೂಗು ತೊಟ್ಟಿಲನು ತೂಗು ತೊಟ್ಟಿಲನು 
ನಮ್ಮ ಜಾಣಮರಿ ಮಲಗಲಿ 


ಒಂದು ಒಂದು ಎರಡು 


——— 


ಬಂದ ಮಾತಿನ ಮಲ್ಲ 
ಜತೆಗೆ ಯಾರೂ ಇಲ್ಲ 
ಅವನು ಒಬ್ಬ ಒಂದು 
ಒಂಟರ ಒಂಟಿ ಒಂದು 


ಒಂಟಿರ ಒಂಟಿ ಒಂದು 
ಅದೋ ಬಂದ ಚೆಂದು 
ಚಾಪೆ ತಂದು ಹರಡು 
ಒಂದು ಒಂದು ಎರಡು 


ಒಂದು ಒಂದು ಎರಡು 
ದೊಡ್ಡ ಚಾಪೆ ಹರಡು 
ಬಂದ ರಾಮಾಚಾರಿ 
ಎರಡು ಒಂದು ಮೂರು 


ಎರಡು ಒಂದು ಮೂರು 
ಹೂವು ಹತ್ತು ಮಾರು 
ಮುಡಿದು ಬಂದಳು ಸಾಕು 
ಮೂರು ಒಂದು ನಾಕು 


೧೦ 


ಮೂರು ಒಂದು ನಾಕು 
ಮಾಡಿಕೊಂಡು ಜೋಕು 
ಬಂದ ಹಳ್ಳಿ ಹೈದ 
ನಾಕು ಒಂದು ಐದು 


ನಾಕು ಒಂದು ಐದು 

ಎಲ್ಲರನ್ನು ಬೈದು 

ಬಿದ ಕಿಟ್ಟಿ ಜಾರಿ 
ಉಾ. 

ಐದು ಒಂದು ಆರು 


ಐದು ಒಂದು ಆರು 
ಹಳ್ಳ ಕೊಳ್ಳ ಹಾರಿ 
ಓಡಿ ಬಂದ ಕಾಳ 

ಆರು ಒಂದು ಏಳು 


ಆರು ಒಂದು ಏಳು 
ಗೋಳು--ಪೂರ ಗೋಳು 
ಅಳುತ ಬಂದ ತುಂಟಿ 
ಏಳು ಒಂದು ಎಂಬು 


೧೧ 


ಏಳು ಒಂದು ಎಂಟು 
ಕೈಯಲ್ಲೊ ಂದು ಗಂಟು 
ಹಿಡಿದು ಬಂದ ಸಂಸತ್ತು 
ಎಂಟು ಒಂದು ಒಂಬತ್ತು 
ಒಂದು--ಎರಡು- -ಮೂರು 
ನಾಕು---ಐದು---ಆರು 
ಏಳು---ಎಂಟು--- ಒಂಬತ್ತು 
ಒಂಬತ್ತು ಒಂದು ಹತ್ತು 


ಗುಬ್ಬಿ 


ಕಾ 


ನಮ್ಮ ಮನೆಯಲೊಂದು ಗುಬ್ಬಿ 
ಗೂಡ ಕಟ್ಟತು 

ಗೂಡಿನೊಳಗೆ ಹುಲ್ಲು ಹಾಸಿ 
ಮೊಟ್ಟಿಯಿಟ್ಟತು. 


ಮೊಟ್ಟೆಯೊಡೆದು ಒಳಗಿನಿಂದ 
ಮರಿಯು ಬಂದಿತು 

ಬಂದು ಬಾಯಿಬಿಟ್ಟು ಕೂಗಿ 
ಕಿಚಿಪಿಚೆಂದಿತು. 


೧೨ 


ಮರಿಯ ಕೂಗ ಕೇಳಿ ತಾಯಿ 
ಗೂಡ ಬಿಟ್ಟತು 

ಹಾರಿ ಹೋಗಿ ಬಂದು ಮರಿಗೆ 
ಗುಟುಕ ಕೊಟ್ಟಿತು. 


ಗುಟುಕು ನುಂಗಿ ಮರಿಯ ರೆಕ್ಕೆ 
ಬಲಿತುಕೊಂಡಿತು 

ರೆಕ್ಕೆ ಬಡಿದು ಹಾರುವುದನು 
ಕಲಿತುಕೊಂಡಿತು. 


ಮರಿಯು ದೊಡ್ಡದಾಗಿ ಮೊದಲ 
ಗೂಡ ಬಿಟ್ಟಿತು 

ತನಗೆ ಒಂದು ಬೇರೆ ಗೂಡ 
ತಾನೆ ಕಟ್ಟ ತು. 


ತನ್ನ ತಿಂಡಿ ತಾನೆ ಹೋಗಿ 
ತರುತಲಿದ್ದಿತು 

ಮದುವೆ ಗಿದುವೆ ಮಾಡಿಕೊಂಡು 
ಹಾಯಾಗಿದ್ದಿ ತು. 


೧ತ್ಠಿ 


ಪ್ರಾರ್ಥನೆ 


ಮಲೆಗಳಲಿ ಕಲ್ಲುಂಟು 
ಹೊಲಗಳಲಿ ಹುಲ್ಲುಂಟು 
ಹೊಳೆಗಳಲಿ ಮೀನುಂಟು 
ಗೂಡಿನಲಿ ಜೇನುಂಟು 
ನೀನುಂಟು ಎಲ್ಲೆಲ್ಲೂ ಓ ಶಿವ 
ನೀನುಂಟು ಎಲ್ಲೆಲ್ಲೂ 


ಬಾಳೆಯಲಿ ಫಲವುಂಟು 
'ಚಂದ್ರನಲಿ ಮೊಲವುಂಟು 
ಹುತ್ತದಲಿ ಹಾವುಂಟು 
ಬೆಂಕೆಯಲಿ ಕಾವುಂಟು 
ನೀನುಂಟು ಎಲ್ಲೆ ಲ್ಲೂ--ಓ ಶಿವ 
ನೀನುಂಟು ಎಲ್ಲೆಲ್ಲೂ 


ದೀಪದಲಿ ಬೆಳಕುಂಟು 

ಕೋಪದಲಿ ಹುಳುಕುಂಟು 

ಸರುವ ಕಡೆ ನೀನುಂಟು 

ಇರುವ ಕಡೆ ನಾನುಂಟು 
ನೀನುಂಟು ಎಲ್ಲೆಲ್ಲೂ ಶಿವ 
ನೀನುಂಟು ಎಲ್ಲೆಲ್ಲೂ 


೧೪ 


ಛೂ! ಛೂ! ಛೂ! 


ಸುತ್ತ ಲೆತ್ತ ರಾಶಿ ಬರಿ 
ಕತ್ತಲೆಯ ಕಡಲೆ ಪುರಿ! 
ಏನು ಸದ್ದು ? ನಾಯಿ ಮರಿ! 


ಛೂ! ಛೂ! ಛೂ! 


ಗೋಡೆ ಹತ್ತಿ ಹಾರುತಲಿ 

ಕಳ್ಳ ಕಂಡಿ ದೂರುತಲಿ 

ಬಂದನದೋ! ಹಾಕು ಬಲಿ! 
ಛೂ! ಛೂ! ಛೂ! 


ಕಚ್ಚ ಬೇಡ! ಹೆದರಿಸುತ 
ಕಚ್ಚು ವಂತೆ ಬೆದರಿಸುತ 
ನುಗ್ಗು ಹಲ್ಲ ತೋರಿಸುತ 
ಛೂ! ಛೂ! ಛೂ! 
ನಿನ್ನ ಕೂಗಿಗವ ಜರುಗಿ 


ಬಂದ ಹಾಗೆ ಹಿಂದಿರುಗಿ 
ಓಡಲೇಳು! ಬಾಯ ತೆಗಿ! 


ಛೂ! ಛೂ! ಛೂ! 


೧೫ 


ನಮ್ಮ ಹುನೆಯ ಸಣ್ಣ ಪಾಪ 


ನಮ್ಮ ಮನೆಯಲೊಂದು ಸಣ್ಣ 
ಪಾಪನಿರುವುದು 

ಎತ್ತಿ ಕೊಳದೆ ಹೋದರದಕೆ 
ಕೋಪ ಬರುವುದು 





ಕೋಪ ಬರಲು ಗಟ್ಟಿಯಾಗಿ 
ಕಿರಿಚಿಕೊಳುವುದು 

ಕಿರಿಚಿಕೊಂಡು ತನ್ನ ಮೈಯ 
ಪರಚಿಕೊಳುವುದು 


೧೬ 


ಮೈಯ ಪರಚಿಕೊಂಡು ಪಾಪ 
ಅತ್ತು ಕರೆವುದು 

ಆಳಲು ಕಣ್ಣಿ ನಿಂದ ಸಣ್ಣ 
ಮುತ್ತು ಸುರಿವುದು 


ಪಾಪ ಅತ್ತ ರಮ್ಮ ತಾನೂ 
ಅತ್ತು ಬಿಡುವಳು 

ಅಯ್ಯೊ ಪಾಸ ಎಂದುಕೊಂಡು 
ಮುತ್ತು ಕೊಡುವಳು 


ಪಾಪ ಸಟ್ಟು ಹಿಡಿದ ಹಟವು 
ಸಾರ್ಥವಾಯಿತು 

ಕರಿಚಿ ಪರಚಿ ಅಳುವುದೆಲ್ಲ 
ಅರ್ಥವಾಯಿತು. 


೧೭ 


ಕಳ್ಳ ಮಲ್ಲ 
ಜುಟ್ಟು ಮಾಸೆಯಿಟ್ಟು ಕೊಂಡು 
ಭಾರಿ ಕಳ್ಳ ಮಲ್ಲ 
ಒಮ್ಮೆ ನಮ್ಮ ಮನೆಗೆ ಬಂದು 
ಕದ್ದ ಉಂಡೆ ಬೆಲ್ಲ 


ಕದಿಯಬಾರದೆಂದರೇನು 
ಮಲ್ಲ ಕೇಳಲಿಲ್ಲ 

ಹಿಡಿಯಲೆಂದು ಹೋದರೆಲ್ಲಿ - 
ಕೈಗೆ ಬೀಳಲಿಲ್ಲ 


ಮನೆಗೆ ಹೋಗಿ ಕೇಳಿದರೆ 
"ಮಲ್ಲ ಮನೆಯಲಿಲ್ಲ' 

ಇತ್ತ ನಮ್ಮ ಮನೆಗೆ ಬಂದು 
ಅಕ್ಕಿ ಕದ್ದ ಮಲ್ಲ 


ಕದಿಯಬೇಡನೆಂದೆನೆಸ್ಟೊ 
ಮಲ್ಲ ಕೇಳಲಿಲ್ಲ 

ತಿರುಗಿ ಬಂದು ಕದ್ದು ಹೋದ 
ಹತ್ತು ಕಂತೆ ಹುಲ್ಲ 


೧೮ 


ಮತ್ತೆ ಅವನ ಮನೆಗೆ ಹೋದೆ 
"ಮಲ್ಲ ಮನೆಯಲಿಲ್ಲ' 

ಇತ್ತ ನಮ್ಮ ಮನೆಗೆ ಬಂದು 
ಬೇಳೆ ಕದ್ದ ಮಲ್ಲ 


ಮಲ್ಲನನ್ನು ಹುಡುಕಿ ಹುಡುಕಿ 
ತಿರುಗಿ ಊರನೆಲ್ಲ 

ಆಲೆದು ಅಲೆದು ಬಿದ್ದು ಹೋದೆ 
ಮಲ್ಲ ಸಿಕ್ಕಲಿಲ್ಲ 


ತಿರುಗಿ ಹೋದೆನವನ ಮನೆಗೆ 
ಮಲ್ಲ ನಿದ್ರಿಸಿದ್ದ 

ಕಳ್ಳ ಮಲ್ಲ ಎಂದು ಹಿಡಿದೆ 
ಮಲ್ಲ ಸಿಕ್ಕಿಬಿದ್ದ 


ಜುಟ್ಟು ಹಿಡಿದುಕೊಂಡು ಚೆ- 
ನ್ನಾಗಿ ಗುದ್ದು ಕೊಟ್ಟಿ 

ಅಂದಿನಿಂದ ದೊಣ್ಣೆ ಮಲ್ಲ 
ಕಳ್ಳತನವ ಬಿಟ್ಟ 


೧೯ 


ಓಬೀರಾಯನ ಕಾಲದಲಿ 
ುಡನು ಹಾಡುವೆನೆಲ್ಲರು ಕೇಳಿ! 
ಡುವುದನಾ ಹಾಡಲಿ ಹೇಳಿ! 
ಹಿಂದಕೆ ಹೋಗುವೆ ಲೀಲೆಯಲಿ 
ಓಜೀರಾಯನ ಕಾಲದಲಿ. 


ನೀರಾಯನ ಪಟ್ಟ ಣದಲ್ಲಿ 

ರಿನ ಬೀದಿಯ ನೀರಿನ ನಲ್ಲಿ 
ಸೊಬ್ಬಾಗಿದ್ದುದು ಸಾಲಿನಲಿ 
ಓಬೀರಾಯನ ಕಾಲದಲಿ. 


ಟನ ನಲ್ಲಿಯ ನೀರನು ಕುಡಿದು 

ಗಳು ಚಿತ್ರವಿಚಿತ್ರದಿ ನಡೆದು 
ಹಾರುತ ನೆಗೆದರು ಗಾಳಿಯಲಿ 
ಓಬೀರಾಯನ ಕಾಲದಲಿ. 


ದಿಯ ಗುಡಿಸುವ ಬಸಲಿಂಗಪ್ಪ 
ಡಿಸಿದನೂರಿನ ಬೀದಿಯ ದಪ್ಪ 
ಹೇಸರಗತ್ತೈಯ ಬಾಲದಲಿ 
ಓಬೀರಾಯನ ಕಾಲದಲಿ. 


೨೦ 


ದೇವರಿಗಾರತಿ ನಡೆಯುವುದೆಂದು 

ಜನಗಳು ಗುಜುಗುಜು ನುಗ್ಗುತ ಬಂದು 
ಜಾಗಟೆ ಬಡಿದರು ತಾಳದಲಿ 
ಓಬೀರಾಯನ ಕಾಲದಲಿ. 


ದೇವರ ಪ್ರಾರ್ಥನೆ ಮಾಡಲು ನಿಂತು 

ಜನಗಳು ಹಾಡನು ಹಾಡಿದರಿಂತು: 
“ಲಾಲಲ ಲಾಲಲ ಲಾಲ ಲಲಿ” 
ಓಬೀರಾಯನ ಕಾಲದಲಿ. 


ಅರ್ಚಕ ಜಿಪುಣ ಜನಾರ್ದನ ಭಟ್ಟಿ 

ದೇವರ ಕುದಿಯುವ ತೀರ್ಥವ ಕೊಟ್ಟ 
ಸೀಳಿದ ಬಿದಿರಿನ ಕೋಲಿನಲಿ 
ಓಬೀರಾಯನ ಕಾಲದಲಿ. 


ಜಿಪ್ರಣ ಜನಾರ್ದನ ಭಟ್ಟಿನು ತನ್ನ 
ಮೈಯಿಗೆ ಬಟ್ಟೆ ಹೊಟ್ಟಿಗೆ ಅನ್ನ 
ಗಿಟ್ಟಿಸುತಿದ್ದನು ಸಾಲದಲಿ 
ಓಬೀರಾಯನ ಕಾಲದಲಿ. 


೨7 


ಕುತಕುತ ಕುದಿಯುತ ಮರಳುವ ನೀರೆ 

ಜನಗಳು ಹೀರುತ ಕುಡಿದರು ಪೂರ 
ಮಟಮಟ ನಡು ಮಧ್ಯಾಹ್ನ ದಲಿ 
ಓಬೀರಾಯನ ಕಾಲದಲಿ. 


ಗುಡಿಯಲಿ ಬಿಲಗಳೊಳಿಲಿಗಳ ನೋಡಿ 

ಜನಗಳು ಹೆದರುತ ಕಿರಿಚುತ ಓಡಿ 
ಅವಿತರು ಗೋಣಿಯ ಚೀಲದಲಿ 
ಓಬೀರಾಯನ ಕಾಲದಲಿ. 


ಇಲಿಗಳು ತಮ್ಮನು ಚೀಲಕೆ ತಳ್ಳಿ 

ಜನಗಳಿಗಿಟ್ಟು ವು ಚಕ್ಕಳಗುಳ್ಳಿ 
ಕುಣಿದರು ಜನಗಳು ಮೇಳದಲಿ 
ಓಬೀರಾಯನ ಕಾಲದಲಿ. 


ಇಲ್ಲಿಗೆ ಹಾಡನು ನಿಲಿಸುವೆನಿಂದು 

ತಿಳಿಯದು ಇನ್ನೇನಾಯಿತೊ ಅಂದು 
ಮಾಸಿದ ಕಾಲದ ಜಾಲದಲಿ 
ಓಬೀರಾಯನ ಕಾಲದಲಿ. 


೨೨ 


ಕೂಸುಮರಿ 


ಕಾರಾ, 


ಕೂಸುಮರಿ ! ಕೂಸುಮರಿ ! 
ಕೂಸುಮರಿ ಬೇಕೇ ಕೂಸುಮರಿ! 
ಅಣ್ಣನ ಬೆನ್ನಿ ಗೆ ಮೈಯನು ಬೆಸೆದು 
ಕತ್ತಿ ದ್ದ ಸುತ್ತ. ಲು ಕ ಗಳನೆಸೆದು 
ಸೊಂಟದ ಸುತಲ ಕಾಲನು ಬಿಗಿದು 
ಅಣ್ಣನು ನೆಗೆದರೆ ತಾನೂ ನೆಗೆದು 
ಮುದ್ದಾ ಗಿರುವುದು ಕೂಸುಮರಿ! 
ಕನ್ನಡ ನಾಡಿನ ಕೂಸುಮರಿ! 


ಕೂಸುಮರಿ! ಕೂಸುಮರಿ! 
ಕೂಸುಮರಿ ಬೇಕೇ ಕೂಸುಮರಿ! 
ಕೆದರಿದ ಕೂದಲ ಮರೆಯಿಂದಿಣಿಕಿ 
೬1211 ಎನ್ನುತ ಕಾಡುತ ಕೆಣಕಿ 
ಬೆಳಗಿನ ಜಾವದ ಕತ್ತಲೆಯಲ್ಲಿ 
ಎಳೆ ಬಿಸಿಲೆರಚುವ ಸೂರ್ಯನ ಹೋಲಿ 
ಮುದ್ದಾ ಗಿರುವುದು ಕೂಸುಮರಿ! 
ಕನ್ನಡ ನಾಡಿನ ಕೂಸುಮರಿ! 


3೩ 


ಕೂಸುಮರಿ! ಕೂಸುಮರಿ! 
ಕೂಸುಮರಿ ಬೇಕೇ ಕೂಸುಮರಿ! 
ಭೂಮಿಯ ಬಲೆಯಿಂದಾಕಾಶಕ್ಕೆ 
ಸರ್ರೆಂದೇರುತ ಬಣ್ಣದ ರೆಕ್ಕೆ 
ಹರಡುತ ಹಾಡುವ ಹಕ್ಕಿಯ ಹಾಗೆ 
ಹರಡುತಲಿರುವುದು ಬೆನ್ನಿನ ಮೇಗೆ 
ಕನ್ನಡ ನಾಡಿನ ಕೂಸುಮರಿ! 
ಕೂಸುಮರಿ ಬೇಕೇ ಕೂಸುಮರಿ! 





೩೪ 


ಒಂದು ಕತೆ 


ಪಯಣ ಕೆ ನಿಂತಿತು 
ಮಯಣದ ಗಾಡಿ! 
ಒಂಟೆತ್ತಿನ ಗಾಡಿ! 
ಗಾಡಿಯ ಮುಂದಿನ 
ಜೋಡಿಯ ನೋಡಿ! 
ಬೆಂಕಿಯ ಹಸು ಜೋಡಿ! 


ಬಂಡಿಯಲೇನಿದೆ ? 
ಜೊಂಡು ಕಮಾನು! 
ಹುಲ್ಲಿನ ಸಾಮಾನು! 
ಬಂಡಿಯ ನಡೆಸಲು 
ಗುಂಡಗೆ ಮಾನು! 
ಕಂಡೆನು ಅದ ನಾನು! 


ಹಸುಗಳ ಬೆಂಕಿಯ 
ಬಿಪಿ ಬಿಪಿ ಸರಿದು 
ಜೊಂಡೂ ಹುಲ್ಲುರಿದು 
ಉರಿಯಲಿ ಮೇಣವು 
ಕರಗಿತು ಹರಿದು! 
ಮಾನೆಗರಿತು ಹುರಿದು! 


೨೫ 


ರೋತೆ ರಾಮು 


ಕೂಡಿ ಕಳೆವ ಲೆಕ್ಕವೆಲ್ಲ 
ಹಾಳು! ಥೂ! ಅನಿಷ್ಟ! 

ತಿಂದು ತಿಂದು ಮಲಗುವುದಕೆ 
ನನಗೆ ಪೂರ ಇಷ್ಟ! 


ಗುಣಿಸುವುದು ಭಾಗಿಸುವುದು 
ಎಲ್ಲ ಬಲು ಪಜೀತಿ! 

ತಿಂದು ಮಲಗಿ ಗೊರಕೆ ಬಿಡಲು 
ನನಗೆ ತುಂಬ ಪ್ರೀತಿ! 


ತಿಂದು ಹಾಗೆ ಗೊರಕೆ ಬಿಡುತ 
ಮಲಗಲೇನು ನಷ್ಟ? 


ಆಟ ಪಾಟ ನನಗೆ ಬೇಡ 
ಎಂದು ರೋತೆ ರಾಮು 

ಮಲಗಿ ಮಲಗಿ ತಂದುಕೊಂಡ 
ಮೈ ಕೈಗೆಲ್ಲ ಜೋಮು! 


೨೬ 


ನವಿಲು 


ಗಗನದೊಡಲು 

ಗುಡುಗು ಸಿಡಿಲು- 
ಗಳನು ಎಸೆದು ಬೆಳೆಸಿತು 

ತಲೆಯ ಮೇಲೆ 

ಮಾಲೆ ಮಾಲೆ- 
ಯಾಗಿ ಮಿಂಚು ಹಳಿಸಿತು. 


ಕಾಡಿನೊಂದು 
ನವಿಲಿಗಂದು 
ಬಹಳ ಹರುಷ ಬೆಳೆಯಿತು 
« ಮಳೆಯ ಕಾಲ 
ಬಂತು! ಭಲ!' 
ಎಂದು ರಾಗ ಎಳೆಯಿತು. 


ಚಾಚಿ ಎದೆಯ 
ತಲೆಯ ತುದಿಯ 
ಜುಟ್ಟನೊದರಿ ಕುಣಿಸಿತು 
ಕಾಲ ನೂಕಿ 
ತಾಳ ಹಾಕಿ 
ಒಂದು ಎರಡು ಎಣಿಸಿತು. 


೨೭ 


ಗರಿಯ ಬಿಚ್ಚಿ 
ದನಿಯ ಹೆಚ್ಚಿ - 

ಸುತ್ತ ಕುಣಿದು ಮೆರೆಯಿತು 
ಅದನು ಕಂಡು 
ಮುಗಿಲ ಹಿಂಡು 

ಹಿಗ್ಗಿ ಮಳೆಯ ಕರೆಯಿತು. 





೨೮ 


ಕಳ್ಳ ರಂಗಪ್ಪ 


ಕಳ್ಳ ರಂಗಪ್ಪನಿಗೆ ಸಿಹಿ ಬಹಳ ಇಷ್ಟ. 
ಸಿಹಿ ಇಟ್ಟ ರವನೆದುರು ಉಳಿಯುವುದೆ ಕಷ್ಟ! 


ಜೇನುಗೂಡಿನ ತುಂಬ ಸಿಹಿ ಜೇನುತುಪ್ಪ 
ಇರುವುದನು ಕೇಳಿದ್ದ ಕಳ್ಳ ರಂಗಪ್ಪ! 
ಜೇನು ತುಪ್ಪವು ಬಟ್ಟ ಗೂಡಿನಲಿ ಸಿಕಲು 
ಕಾಸುಕೊಟ್ಟದ ಕೊಳಲು ನನಗೆಲ್ಲಿ ತಿಕಲು' 
ಎಂದು ಜೇನಿರಿಸಿದ್ದ ತುಪ್ಪವನು ಕಳಲು 
ಕಾದಿದ್ದ ನಿಳಿವುದಕೆ ಕತ್ತ ಲೆಯ ನೆಳಲು. 
ಕತ್ತ ಲಾಯಿತು ಮೇಲೆ ಲಕ್ಷ ನಕ್ಷತ್ರ! 
ಕಳ್ಳ ತನ ಬಲು ಕೆಡುಕು! ರಂಗಪ್ಪ! ಭದ್ರ! 
ಹಗಲೆಲ್ಲ ಹೂವುಗಳ ಸಾರವನು ಹೀರಿ 
ರಾತ್ರೆ ಗೂಡನು ಜೇನು ಮುತ್ತಿತ್ತು ಸೇರಿ. 


ಹಗಲೆಲ್ಲ ಅಲೆದಾಡಿ ದುಡಿದು ಸಾಕಾಗಿ 
ರಾತ್ರಿ ಯಲಿ ಮಲಗಿತ್ತು ಜೇನು ಜೋಕಾಗಿ. 


೨೯ 


ಗೂಡಿಗಿಟ್ಟನು ಕಳ್ಳ ರಂಗಪ್ಪ ಕೈಯ! 
ಅವನ ಕ್ಸ ತಾಕಿತ್ತು ಜೇನುಗಳ ಮೈಯ! 


ಜೇನುಗಳು ಒಟ್ಟಾಗಿ ರ್ಭುಯೆಂದು ಎದ್ದು 
“ಕಳ್ಳ! ಕಳ್ಳಾ!” ಎನಲು ಹೆಚಿ ದುದು ಸದ್ದು! 
KI) 6 


ಸದ್ದ ಕೇಳಿದ! ಬಿದ್ದು ಓಡಿದನು ಕಳ್ಳ! 
ತುಪ್ಪ ತಿನಲಿಲ್ಲವನು! ತಿಂದ ಬರಿ ಮುಳ್ಳ! 
















































































ತಿಂ 


ನೀರ ಗಫೂರನ ಕುದುರೆಯ ಗಾಡಿ 


ನೀರ ಗಫೂರನ ಕುದುರೆಯ ನೋಡಿ! 

ನೀರ ಗಫೂರನ ಗಾಡಿಯ ನೋಡಿ! 

ಎಲ್ಲಿದೆ ವೀರನ ಗಾಡಿಯ ಜೋಡಿ 
ಹೆಹ್ಹ! ಹೆಣ್ಣ! ಹೈ! ಹೈ! ಹೈ! 


ಸಿಕ್ಕಲಿ ತಿಟ್ಟು ಸಿಕ್ಕಲಿ ಬೈಲು 

ಗಾಡಿಯು ನಿಮಿಷಕೆ ಸಾವಿರ ಮೈಲು! 

ಕುದುರೆಯ ಮುಂದೆ ಏತಕೆ ರೈಲು! 
ಹೆಹ್ನ! ಹೆಹ್ಹ! ಹೈ! ಹೈ! ಹೈ! 


ಲಗಾಮು ಚಾವಟ ಕೈಯಿಗಳೊಳಗೆ 

ಗಾಡಿಯಲಿದ್ದ ರೆ ಬಾಡಿಗೆ ಒಳಗೆ 

ಹಾರಿತು ಕುದುರೆ ಒಂದೇ ಗಳಿಗೆ! 
ಹೆಹ್ಹ! ಹೆಹ್ಹ! ಹೈ! ಹೈ! ಹೈ! 


ಚಕ್ರದ ಕಟಕಟ ಕಟಕಟ ಸದ್ದು 

ಕತ್ತಿನ ಗೆಜ್ಜೆ ಯ ಕೆಣಿಕಿಣಿ ಮುದ್ದು 

ಕೇಳಲು ಕುದುರೆಯು ಹಾರುವ ಹದ್ದು! 
ಹೆಣ್ಣ! ಹೆಣ್ಹ! ಹೈ! ಹೈ! ಹೈ! 


೩೧ 


ಕುದುರೆಯು ಹೀರ ಗಫೂರನದೆಂದು 

ಚಕ್ರಗಳಿದ್ದರು ಗಾಡಿಯು ಹಿಂದು! 

ಚಕ್ರಗಳಿಲ್ಲದ ಕುದುರೆಯೆ ಮುಂದು! 
ಹೆಹ್ಹ! ಹೆಣ್ಣ! ಹೈ! ಹೈ! ಹೈ! 


ಕುದುರೆಯ ಬೆನ್ನಿಗೆ ತಾಕಲು ಬಾರು 

ಗಾಡಿಯೆ ನನ್ನದು ಮೋಟರು ಕಾರು! 

ಡ್ರೈನರು ನಾನೇ ಪೀರ ಗಫೂರು! 
ಹೆಣ್ಣ! ಹೆಹ್ನ! ಹೈ! ಹೈ! ಹೈ! 





ಬಿ. ಬಿ. ಡಿ. ಪವರ್‌ ಪ್ರೆಸ್‌, ಅರಳೇಸೇಟೆ, ಬೆಂಗಳೂರು ಸಿಟಿ.